Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಿಜವಾದ ಪ್ರಜಾರಾಜ್ಯ ಅಧಿಕಾರಕ್ಕೆ ಬಂದರೂ ಆಗಿದ್ದೇನು.. 3.5/5 ****
Posted date: 05 Sun, Mar 2023 03:01:23 PM
ನಮಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು  ಕಳೆದರೂ ನಾವೆಲ್ಲ ಸ್ವತಂತ್ರರಾಗಿದ್ದೇವಾ ಅಂತ ಒಮ್ಮೆ ಯೋಚಿಸಿದಾಗ ಅದಕ್ಕೆ ಉತ್ತರ ಸಿಗೋದೇ ಇಲ್ಲ. ಈವಾರ ತೆರೆಕಂಡಿರುವ ಪ್ರಜಾ ರಾಜ್ಯ ಚಿತ್ರವೂ ಇದೇ ಕಂಟೆಂಟ್ ಮೇಲೆ ನಿಂತಿದೆ. 

ನಾವು ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ. ನಮಗೆಲ್ಲ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸಿಗುತ್ತಿವೆಯೇ ಎಂದು ಯಾರೂ ಯೋಚಿಸುತ್ತಿಲ್ಲ.  ನಮ್ಮ ವೀಕ್ ನೆಸ್ ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು  ದೇಶವನ್ನಾಳುತ್ತಿದ್ದಾರೆ

ದೇಶದ ಪ್ರತಿಯೊಬ್ಬ ಪ್ರಜೆಗೂ ಬದುಕುವ ಹಕ್ಕಿದೆ. ತಮ್ಮ  ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಳ್ಳಲು  ಹೋರಾಡುವ ಸ್ವಾತಂತ್ರ ಎಲ್ಲರಿಗೂ ಇದೆ. ಪ್ರಜೆಗಳು, ಸೌಲಭ್ಯದಿಂದ ವಂಚಿತರಾದವರು, ಎಲ್ಲರಿಗೂ ಒಳಿತಾಗಬೇಕೆಂದು ಸಮಾನ ಮನಸ್ಕರೆಲ್ಲ ಸೇರಿ  ಮೌನಪ್ರತಿಭಟನೆ  ನಡೆಸಿ ನ್ಯಾಯ ಕೇಳಲು ಮುಂದಾಗುತ್ತಾರೆ. ಆಡಳಿತ ಪಕ್ಷಕ್ಕೆ ಇದರಿಂದ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಗೃಹಮಂತ್ರಿಗಳು ಅವರನ್ನು ಚದುರಿಸಿ ಇಲ್ಲದಿದ್ದರೆ ಬಂಧಿಸಿ ಎಂದು ಸೂಚಿಸುತ್ತಾರೆ. ಮುಂದೆ ಈ ಐವರ ಹಿಂದಿನ  ಕಥೆ ತೆರೆದುಕೊಳ್ಳುತ್ತದೆ.  ಮೆಟಲ್ ಇಂಡಸ್ಟಿಸ್  ನಡೆಸುತ್ತಿರುವ ಭೀಮರಾವ್ (ಅಚ್ಯುತ್‌ಕುಮಾರ್) ಕಷ್ಟದಲ್ಲಿದ್ದರೂ ಕೆಲಸಗಾರರಿಗೆ ಸಂಬಳ ನೀಡಿ, ನಂತರ ಒಂದಷ್ಟು ಸಮಸ್ಯೆಗೆ ಸಿಕ್ಕಿಹಾಕಿಕೊಂಡು  ಸಂಸ್ಥೆಯನ್ನೇ ಮುಚ್ಚಬೇಕಾಗುತ್ತದೆ.  ಪ್ರತಿಭಾವಂತ, ಹೆಚ್ಚು ಓದಿಕೊಂಡಿರುವ, ಅರ್ಹತೆಗೆ ತಕ್ಕ ಕೆಲಸ ಸಿಗದಿದ್ದರೂ, ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ದರ್ಮೆಂದ್ರ (ವರದರಾಜು)  ಯಾವಾಗಲೂ ಸತ್ಯದ ಹಾಗೂ  ನ್ಯಾಯದ ಪರ ನಿಲ್ಲುತ್ತಾನೆ. 

ಸ್ನೇಹಿತನಿಗೆ ಪೆಟ್ಟು ಬಿದ್ದಾಗ  ಸರ್ಕಾರಿ ಆಸ್ಪತ್ರಗೆ ಸೇರಿಸಿ ಅಲ್ಲಿ  ಚಿಕಿತ್ಸಾ ಸೌಲಭ್ಯ ಸಿಗದಿದ್ದಾಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾನೆ. ರೈತ ಕುಟುಂಬದಲ್ಲಿ ಹುಟ್ಟಿದ ಅರ್ಜುನ(ವಿಜಯ್ ಭಾರ್ಗವ್) ಚೆನ್ನಾಗಿ ಓದಿಕೊಂಡರೂ, ಸೂಕ್ತಕೆಲಸ ಸಿಗದೇ  ಫ್ಯಾಕ್ಟರಿ ಸೇರಿಕೊಂಡು ಅದೂ ಮುಚ್ಚಿದಾಗ ಹಳ್ಳಿಗೆ ಹೋಗಿ ರೈತನಾಗಲು ನಿರ್ಧರಿಸುತ್ತಾನೆ.

ಪೋಷಕರು ತಮ್ಮ ಆಸ್ತಿ ಪತ್ರವನ್ನು ಅಡವಿಟ್ಟು ಮಗನ  ಕೆಲಸಕ್ಕೆ  ನೆರವಾಗುತ್ತಾರೆ. ಆದರೆ ಬೆಳೆದ ಬೆಳೆಗೆ, ಸೂಕ್ತ ಬೆಲೆ ಸಿಗದೆಹೋದಾಗ  ನ್ಯಾಯದ ಹೋರಾಟಕ್ಕೆ  ಮುಂದಾಗುತ್ತಾನೆ. ಇನ್ನು (ಸಂಪತ್ ಮೈತ್ರೇಯ)  ಜೀವನ ನಡೆಸುವುದೇ ಕಷ್ಟವಿದ್ದಾಗಲೂ ಮಗಳಿಗೆ ಉತ್ತಮ ವಿದ್ಯೆ  ಕೊಡಿಸಬೇಕೆಂದು  ಸಾಲಮಾಡಿ ಖಾಸಗಿ ಶಾಲೆಗೆ ಸೇರಿಸಿರುತ್ತಾರೆ.  ಖಾಸಗಿ ಶಾಲೆಯವರ ಧನದಾಹಕ್ಕೆ  ನಲುಗಿಹೋಗುತ್ತಾನೆ. ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಇದಕ್ಕೊಂದು ಪರಿಹಾರ ನೀಡಬೇಕೆಂದು ಲಾಯರ್(ಸುಧಾರಾಣಿ) ಮೂಲಕ ಹೋರಾಟಗಾರ ಜಯಪ್ರಕಾಶ್ (ದೇವರಾಜ್) ಅವರನ್ನು ಭೇಟಿ ಮಾಡುತ್ತಾರೆ. ಆಡಳಿತ  ಪಕ್ಷ ದವರಿಗೆ ಈ ಜಯಪ್ರಕಾಶ್ ಕಂಡರೆ ಭಯ. ಆದರೆ ಈ ಜಯಪ್ರಕಾಶ್  ಯುವ ಸಂಘಟಿತರನ್ನೆಲ್ಲ ಸೇರಿಸಿಕೊಂಡಯ  ಪಕ್ಷ ಕಟ್ಟಿ ಚುನಾವಣೆಯಲ್ಲಿ  ತಮ್ಮ  ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಹೀಗೆ  ಗೆದ್ದ ನಾಯಕರ ಅಧಿಕಾರದ ಹಾದಿ ಮತ್ತೊಂದು ದಿಕ್ಕು ಪಡೆದುಕೊಳ್ಳುತ್ತದೆ. ಈ ಸಚಿವರು  ಪ್ರಜೆಗಳಿಗೆ ಕೊಟ್ಟ ಆಶ್ವಾಸನೆ ಈಡೇರಿಸುತ್ತಾರಾ, ಇಲ್ವಾ ಇದರಲ್ಲಿ ವಿರೋಧ ಪಕ್ಷಗಳ ಕೈವಾಡವೇನು, ಪ್ರತಿ ಪ್ರಜೆ ಹಾಕುವ ಮತ ಎಷ್ಟುಮುಖ್ಯವಾಗಿರುತ್ತೆ ಇಂಥ  ಹತ್ತಾರು  ಪ್ರಶ್ನೆಗಳಿಗೆ ಉತ್ತರವನ್ನು  ಪ್ರಜಾರಾಜ್ಯ ನೀಡಲಿದೆ. 

ಸಂದೇಶದ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು  ನಿರ್ಮಾಪಕ ಡಾ. ವರದರಾಜು ಅವರು  ಮಾಡಿದ್ದಾರೆ.  ಕಥೆ, ಚಿತ್ರಕಥೆ , ಸಂಭಾಷಣೆ ಬರೆದು  ಸತ್ಯದ ಪರವಾಗಿ ನಿಲ್ಲುವ ಧರ್ಮೇಂದ್ರನ ಪಾತ್ರದಲ್ಲಿ   ಗಮನ ಸೆಳೆಯುತ್ತಾರೆ.

ನಿರ್ದೇಶಕ ವಿಜಯ್ ಭಾರ್ಗವ್  ಪ್ರಥಮ ಪ್ರಯತ್ನದಲ್ಲಿ ಒಂದು ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ  ನೀಡಿದ್ದಾರೆ.  

ಸಂವಿಧಾನದ ಮಹತ್ವ, ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳ ಕಾರ್ಯವೈಖರಿಯ ಜೊತೆಗೆ ನಾಗರಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು, ಪ್ರಜಾಪ್ರಭುತ್ವದ ತಿಳುವಳಿಕೆ, ನಮ್ಮ ಹಕ್ಕು, ನಮ್ಮ ಮತ, ಸ್ವಾವಲಂಬಿಯ ಬದುಕು ಎಷ್ಟು ಮುಖ್ಯ ಎಂಬುದನ್ನು ತೆರೆಯಮೇಲೆ ತಂದಿದ್ದಾರೆ.  ವಿಜೇತ್ ಮಂಜಯ್ಯ ಅವರ ಸಂಗೀತ ಚಿತ್ರಕಥೆಗೆ ಪೂರಕವಾಗಿದ್ದುಘ,  ರಾಕೇಶ್. ಸಿ. ತಿಲಕ್  ಅವರ ಕ್ಯಾಮರಾ ಕೈಚಳಕ ಉತ್ತಮವಾಗಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಿಜವಾದ ಪ್ರಜಾರಾಜ್ಯ ಅಧಿಕಾರಕ್ಕೆ ಬಂದರೂ ಆಗಿದ್ದೇನು.. 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.